ಬುಧವಾರ, ನವೆಂಬರ್ 16, 2022

ಹಾವು ಏಣಿ ಆಟ

 💫💫💫💫💫💫💫💫💫💫💫💫

  


    #ಹಾವು-ಏಣಿಯಾಟ ಸಾಮಾನ್ಯವಾಗಿ ಎಲ್ಲ ತರಹದ ಜನರು, ಮಕ್ಕಳು  ಆಡಿದಂತಹ ಒಂದು ಪಟ್ಟಿ. ಆದರೆ ಮೂಲತಹ ಇದು #ಮೋಕ್ಷ_ಪಥವೆಂಬ  ಅತ್ಯಂತ ಪುರಾತನವಾದ ಭಾರತೀಯ ಆಟವಾಗಿತ್ತು, ಮುಂದೆ ಬಂದಂತಹ ವಿದೇಶಿಯರು ಈ ಆಟವನ್ನು ಹಾವು-ಏಣಿ ಆಗಿ ಬದಲಾಯಿಸಿದರು.

       ಆದರೆ ಈ ಆಟವು 13ನೇ ಶತಮಾನದಲ್ಲಿ ಗ್ಯಾನ ದೇವನೆಂಬ ಋಷಿಯಿಂದ ಕಂಡುಹಿಡಿಯಲ್ಪಟ್ಟವು ಮುಂದೆ ಇದು ಗ್ಯಾನ್ ಚೌಪರ್ ಎಂದು ಪ್ರಸಿದ್ಧಿಯಾಯಿತು ಹಾಗೆಯೇ ಆಟವನ್ನು ಪರಮಪದ, ಲೀಲಾ, ಮುಕ್ತ ಪೀಠ ಎಂದೆಲ್ಲಾ ಆಯಾ ಕ್ಷೇತ್ರಕ್ಕೆ ಪ್ರದೇಶಕ್ಕೆ ಸಂಬಂಧಿಸಿದಂತೆ ಕರೆಯಲಾಯಿತು. ಈ ಆಟ ಸಾಮಾನ್ಯ  ಹಾವು ಏಣಿ ಆಟದಂತೆ ಇದರಲ್ಲಿ ಚೌಕಾಕಾರದ ಒಂದು ಕಾಯಿ ಇರುತ್ತದೆ ಅದರಲ್ಲಿ ಒಂದರಿಂದ ಆರರವರೆಗೆ ಸಂಖ್ಯೆಗಳಿರುತ್ತವೆ ಹೇಗೆ ಹಾವು-ಏಣಿ ಆಟದಲ್ಲಿ ಕಾಯಿ ಉರುಳಿಸಿ ಸಂಖ್ಯೆಗೆ ಅನುಸಾರವಾಗಿ ಮುಂದೆ ಹೋಗುತ್ತೇವೋ ಹಾಗೆ ಇದರಲ್ಲಿ ಕೂಡಾ ಹಾವು-ಏಣಿಯಲ್ಲಿ ಸಂಖ್ಯೆ ಮಾತ್ರ ಇದ್ದರೆ ಇಲ್ಲಿ ನಮ್ಮ ಸನಾತನ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ* ವಿಚಾರಗಳು ತುಂಬಿ ಅದರ ಮೂಲಕ ಈ ಆಟವು ಆರಂಭವಾಗುತ್ತದೆ. ಮತ್ತು ಇಲ್ಲಿ ಮೊದಲ ಸಂಖ್ಯೆ ಒಂದರ ಬದಲು ಜನ್ಮ ಎಂದು ಇದೆ ( ಚೌಕ ಪಟ್ಟಿ ಗಮನಿಸಿ).

ಈ ಆಟವು ದೇವರ ಹುಟ್ಟಿನಿಂದ ಅಂದರೆ ಮಹಾವಿಷ್ಣುವಿನ ಅವತಾರದಿಂದ ಒಂದನೇ ಸಂಖ್ಯೆ ಆರಂಭ. ಈ ಆಟದಲ್ಲಿ 44ನೇ ಸಂಖ್ಯೆಯು ಅವಿದ್ಯೆಯನ್ನು ಸೂಚಿಸಿದರೆ ಅಲ್ಲಿರುವ ಹಾವು ಅಂದರೆ ಆ ಸಂಖ್ಯೆಗೆ ನೀವು ತಲುಪಿದರೆ ಅಲ್ಲಿರುವ ಹಾವು ನಿಮ್ಮನ್ನು ಕಾಮಕ್ಕೆ ತಳ್ಳಿಬಿಡುತ್ತದೆ. ಹಾಗೆ ಹಿಂಸೆ ನೀವು ದಾಳವನ್ನು  ಹಾಕಿದರೆ ಅದು ಅದು ನಿಮ್ಮನ್ನು ಹಾವಿನ ಮೂಲಕ ನರಕಕ್ಕೆ ತಳ್ಳಿಬಿಡುತ್ತದೆ ( ಚೌಕ ಪಟ್ಟಿ ಗಮನಿಸಿ). ಹೀಗೆ ಮುಂದುವರೆಯುವ ಆಟವು 0ಅತ್ಯಂತ ರೋಮಾಂಚನಕಾರಿ ಹಾಗೂ ನಮ್ಮ ಸನಾತನ ಧರ್ಮದ ಮೂಲ ಪಾಠವನ್ನು ತಿಳಿಸಿ ಬಿಡುತ್ತದೆ.

       ಇದೊಂದು ಸುಂದರವಾದ ಆಟ ಇದರಲ್ಲಿ  ಮಕ್ಕಳಿಗೆ ಸಾಮಾನ್ಯ ಹಾವು-ಏಣಿ ಆಟ ಆದರೆ ಹಿರಿಯರಿಗೆ ಇದೊಂದು ಜ್ಞಾನದ ಭಂಡಾರ ಸಮಯಸಿಕ್ಕಾಗ ಸಮಯ ಕಲೆಯುವುದರ ಜೊತೆಗೆ ಸಮಯವನ್ನು ಸದುಪಯೋಗ ಮಾಡುವುದಕ್ಕೂ ಇದಕ್ಕಿಂತ ಉತ್ತಮ ಆಟ ಇಲ್ಲ.


       ಈ ಆಟದ ಅಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ


   https://play.google.com/store/apps/details?id=com.kholkhel.buddhiyoga


ಹಾಗೆ buddhiyoga. in website ಮೂಲಕ ಕೂಡ ಪಡೆಯಬಹುದು


✍️ದೇವಿಪ್ರಸಾದ್

Info courtesy :@sampadananada

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ